ನ್ಯಾಷನಲ್ ಹೆರಾಲ್ಡ್ ನ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತೊಮ್ಮೆ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಸೋನಿಯಾ ಅವರೊಂದಿಗೆ ಪುತ್ರಿ ಪ್ರಿಯಾಂಕಾ, ಪುತ್ರ ರಾಹುಲ್ ತೆರಳಿದ್ರು. ತಾಯಿ ಸಹೋದರಿಯನ್ನು ಇ.ಡಿ ಕಚೇರಿ ಬಳಿ ಇಳಿಸಿದ ರಾಹುಲ್ ಗಾಂಧಿ, ಸಂಸತ್‍ಗೆ ತೆರಳಿ ಪ್ರತಿಭಟನೆಯ ಮುಂದಾಳತ್ವ ವಹಿಸಿದ್ರು. ಕಳೆದ ಗುರುವಾರ ಮೂರು ಗಂಟೆ ಸೋನಿಯಾ ಗಾಂಧಿ ವಿಚಾರಣೆ ಎದುರಿಸಿದ್ದರು. ಈ ಸಂದರ್ಭದಲ್ಲಿ 20 ಪ್ರಶ್ನೆಗಳನ್ನು ಕೇಳಲಾಗಿತ್ತು. ಇವತ್ತು - ಗಂಟೆಗಳ ಕಾಲ ಕಾಂಗ್ರೆಸ್ ಅಧ್ಯಕ್ಷೆ ವಿಚಾರಣೆಗೆ ಒಳಪಟ್ಟಿದ್ದಾರೆ. ಸೋನಿಯಾ ವಿಚಾರಣೆ ನಡೆಯುತ್ತಿದ್ದ ಪಕ್ಕದ ಕೊಠಡಿಯಲ್ಲಿ ಪ್ರಿಯಾಂಕ ಉಳಿದುಕೊಂಡಿದ್ದರು. ಪ್ರತಿ ಮೂರು ಗಂಟೆಗೊಮ್ಮೆ ಸೋನಿಯಾ ಗಾಂಧಿಗೆ ನೆಬ್ಯುಲೈಸೇಷನ್ ತೆಗೆದುಕೊಳ್ಳುವ ಅನಿವಾರ್ಯತೆ ಹಿನ್ನೆಲೆಯಲ್ಲಿ ಪುತ್ರಿ ಪ್ರಿಯಾಂಕಾ ಔಷಧಿಗಳ ಜೊತೆ ಇ.ಡಿ ಕಚೇರಿಯಲ್ಲಿ ಇದ್ದರು.
ಸೋನಿಯಾ ಗಾಂಧಿಗೆ ಇ.ಡಿ ಡ್ರಿಲ್ ಹಿನ್ನೆಲೆಯಲ್ಲಿ ಎಂದಿನಂತೆ ದೇಶಾದ್ಯಂತ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಬೀದಿಗೆ ಇಳಿದಿದ್ರು. ದೆಹಲಿಯಲ್ಲಿ ಭಾರೀ ಹೈಡ್ರಾಮಾಗಳು ನಡೆದವು. ರಾಹುಲ್ ಗಾಂಧಿಯಂತೂ ವಿಜಯ್ ಚೌಕ್‍ನಲ್ಲಿ ರಸ್ತೆ ಮೇಲೆ ಕುಳಿತುಬಿಟ್ಟಿದ್ರು. ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಭಾರತ ಪೊಲೀಸ್ ರಾಜ್ಯವಾಗಿದೆ.. ಮೋದಿ ರಾಜನಾಗಿದ್ದಾರೆ.. ಸರ್ವಾಧಿಕಾರಿಯಾಗಿದ್ದಾರೆ.. ಸಂಸತ್‍ನಲ್ಲಿ ಚರ್ಚೆಗೆ ಅವಕಾಶ ನೀಡುತ್ತಿಲ್ಲ, ಇಲ್ಲಿ ಪ್ರತಿಭಟನೆಗೆ ಅವಕಾಶ ಮಾಡಿಕೊಡುತ್ತಿಲ್ಲ.. ಎಂಬ ಗಂಭೀರ ಆರೋಪ ಮಾಡಿದ್ದಾರೆ. ಈ ಸರ್ವಾಧಿಕಾರಕ್ಕೆ ಸತ್ಯದಿಂದಲೇ ಅಂತ್ಯ ಎಂದಿದ್ದಾರೆ. ಸಂಸದ ಡಿಕೆ ಸುರೇಶ್‍ರನ್ನು ಪೊಲೀಸರು ಅಕ್ಷರಷಃ ಎತ್ತಿಕೊಂಡು ವ್ಯಾನ್‍ಗೆ ಹಾಕಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಬಿವಿ ಶ್ರೀನಿವಾಸ್ ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದಕ್ಕೂ ಮುನ್ನ, ಕಾಂಗ್ರೆಸ್ ಸಂಸದರು, ನಾಯಕರು ಸಂಸತ್‍ನಿಂದ ಮೆರವಣಿಗೆ ಮೂಲಕ ವಿಜಯ್‍ಚೌಕ್‍ವರೆಗೂ ಬಂದರು. ಇತ್ತ, ಬೆಂಗಳೂರಲ್ಲಿ ಕಾಂಗ್ರೆಸ್ ನಾಯಕರು ಮೌನ ಪ್ರತಿಭಟನೆ ನಡೆಸಿದ್ರು. ಜ್ವರದ ನಡುವೆಯೂ ಸಿದ್ದರಾಮಯ್ಯ, ಡ್ರಿಪ್ಸ್ ಸಿರೀಂಜ್‍ನಲ್ಲಿಯೇ ಧರಣಿಯಲ್ಲಿ ಕಾಣಿಸಿಕೊಂಡ್ರು. ಈ ಮಧ್ಯೆ, ಕಾಂಗ್ರೆಸ್ ಟ್ವೀಟ್ ಮಾಡಿ, ಕೇಂದ್ರದ ತನಿಖಾ ತನಿಖಾ ಸಂಸ್ಥೆಗಳು ಬಿಜೆಪಿಯ ಪ್ರೊಪಗಂಡಾ ಮೆಷಿನರಿಗಳಾಗಿವೆ ಎಂದು ಆರೋಪಿಸಿದೆ.
#publictv #bigbulletin #hrranganath